ಶುಕ್ರವಾರ, ಮೇ 29, 2020
27 °C
hot-news ಈ ಕ್ಷಣ :
ಖ್ಯಾತ ಜ್ಯೋತಿಷಿ ಬೆಜನ್ ದಾರುವಾಲ ನಿಧನ ಯಡಿಯೂರಪ್ಪ ನಮ್ಮ ನಾಯಕ; ನಾನು ಯಾವತ್ತಿದ್ದರೂ ಚಡ್ಡಿ ಗ್ಯಾಂಗ್ ಲೀಡರ್: ಸಿಟಿ ರವಿ ಬಿಜೆಪಿ ಸೇರಲು 20 ಮಂದಿ ಶಾಸಕರು ಸಿದ್ಧರಿದ್ದಾರೆ: ಲಕ್ಷ್ಮಣ ಸವದಿ ವಿಪ್ರೊ ಕಂಪನಿಯ ನೂತನ ಸಿಇಒ ಥಿಯೆರ‍್ರಿ ಡೆಲಾಪೋರ್ಟ್ ನಿಮ್ಮ ಸ್ಮರಣೆ ‘ಅಮರ’ ಪ್ರೀತಿ: ಅಂಬರೀಶ್‌ ಜನ್ಮದಿನಕ್ಕೆ ಸುಮಲತಾ ಟ್ವೀಟ್‌   Covid-19 Karnataka Update | ಒಂದೇ ದಿನ 178 ಪ್ರಕರಣ, ಸೋಂಕಿತರ ಸಂಖ್ಯೆ 2711 ಅಂಬರೀಶ್‌ ನೆನಪು: ಜಗ್ಗೇಶ್‌ ಹಂಚಿಕೊಂಡ ಮೂರು ಪ್ರಸಂಗ  ಟ್ರೂಕಾಲರ್ ಆ್ಯಪ್ ಬಳಸ್ತಿಲ್ಲವೇ? ಆದ್ರೂ ನಿಮ್ಮ ಮಾಹಿತಿ ಅದರಲ್ಲಿರುತ್ತದೆ, ಎಚ್ಚರ! ಕಾಂಗ್ರೆಸ್‌ನ 22 ಶಾಸಕರು ರಾಜೀನಾಮೆ‌ ಕೊಡಲು ಸಿದ್ಧರಿದ್ದಾರೆ: ರಮೇಶ್ ಜಾರಕಿಹೊಳಿ ಕೋವಿಡ್‌-19: ರಾಯಚೂರಿನಲ್ಲಿ ಒಂದೇ ದಿನ 62 ಕೊರೊನಾ ಸೋಂಕು ಪ್ರಕರಣ ಕೋವಿಡ್‌-19: ಅನಿವಾಸಿ ಕನ್ನಡಿಗರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿಡಿಯೊ ಸಂವಾದ ಪುಲ್ವಾಮಾ ಮಾದರಿ ದಾಳಿಗೆ ಯತ್ನ: ಕೃತ್ಯಕ್ಕೆ ಬಳಸಿದ್ದ ಕಾರು ಮಾಲೀಕನ ಗುರುತು ಪತ್ತೆ ರಾಜ್ಯಸಭೆ ಕಚೇರಿಯ ಅಧಿಕಾರಿಗೆ ಕೋವಿಡ್–19 494 ದೇಶೀಯ ವಿಮಾನಗಳಲ್ಲಿ 38 ಸಾವಿರಕ್ಕೂ ಅಧಿಕ ಜನರ ಪ್ರಯಾಣ: ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಇರದಿದ್ದರೆ ಸಮುದಾಯ ಪ್ರಸರಣೆ ಹಂತಕ್ಕೆ ಜಾರಲಿದ್ದೇವೆ: ಕೇರಳ ಸಿಎಂ ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ 116 ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌-19 ಕೋವಿಡ್–19: ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದ ಭಾರತ

ಕುಬೇರರ ಊರಲ್ಲಿ ಹಸಿವಿನಿಂದ ಸಾವು?

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಅನ್ನ, ನೀರು ಸಿಗದೆ ಹೊಸಪೇಟೆಯ ರಸ್ತೆಬದಿಯಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಶವವನ್ನು ನಗರಸಭೆಯ ಸಿಬ್ಬಂದಿ ಕಸ ಸಾಗಿಸುವ ವಾಹನದಲ್ಲಿ ಸಾಗಿಸಿದರು

ಹೊಸಪೇಟೆ: ಸಕಾಲಕ್ಕೆ ಅನ್ನ, ನೀರು ಸಿಗದೆ ಗಣಿ ನಗರಿಯ ರಸ್ತೆ ಬದಿಯಲ್ಲಿ ವಾರದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವಿಚಿತ್ರವೆಂದರೆ ಇಬ್ಬರ ಶವಗಳನ್ನು ನಗರಸಭೆಯ ಕಸ ವಿಲೇವಾರಿ ಮಾಡುವ ವಾಹನದಲ್ಲಿ ಸಾಗಿಸಲಾಗಿದೆ. ಅನ್ನ ಸಿಗದೆ ರಸ್ತೆಬದಿಯಲ್ಲಿ ಶವವಾಗಿ ಬಿದ್ದವರೂ ಯಾರೆಂಬುದೂ ಇದುವರೆಗೆ ಗೊತ್ತಾಗಿಲ್ಲ.

ತಾಲ್ಲೂಕಿನಲ್ಲಿ ಒಂದು ಅಂದಾಜಿನ ಪ್ರಕಾರ, ನಿರ್ಗತಿಕರು, ಭಿಕ್ಷುಕರು, ಅಲೆಮಾರಿಗಳ ಸಂಖ್ಯೆ ಏಳರಿಂದ ಎಂಟು ಸಾವಿರಕ್ಕೂ ಅಧಿಕವಿದೆ. ಕೆಲವರು ರೈಲು ನಿಲ್ದಾಣ, ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವವರಿದ್ದರೆ, ಕೆಲವರು ದೇವಸ್ಥಾನ, ಮತ್ತೆ ಕೆಲವು ಮಂದಿ ಊರೆಲ್ಲ ಸುತ್ತಾಡಿ ಎಲ್ಲಿ ಕತ್ತಲಾಗುತ್ತದೆಯೋ ಅಲ್ಲಿಯೇ ಉಳಿದು ಬಿಡುತ್ತಾರೆ.

ಆದರೆ, ಎಲ್ಲೆಡೆ ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್‌ ಘೋಷಿಸಿರುವುದರಿಂದ ಬಹುತೇಕರ ಪತ್ತೆ ಇಲ್ಲದಂತಾಗಿದೆ. ಇನ್ನು, ನಗರ ಹೊರವಲಯದ ಜಂಬುನಾಥಹಳ್ಳಿಯಲ್ಲಿ 200ಕ್ಕೂ ಅಧಿಕ ಮಂದಿ ಅಲೆಮಾರಿಗಳಿದ್ದು, ಸಹಾಯಕ್ಕೆ ಅವರು ಅಂಗಲಾಚಿದ್ದಾರೆ.

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಅನೇಕ ಜನ ಗಣಿ ಉದ್ಯಮಿಗಳಿದ್ದಾರೆ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗೆ ಬಂದವರೂ ಬೆರಳೆಣಿಕೆಗಿಂತ ಕಡಿಮೆ. ಪತ್ತಿಕೊಂಡ ಕುಟುಂಬದವರು ನಗರದಲ್ಲಿ ಔಷಧ ಸಿಂಪಡಣೆಗೆ ಉಚಿತವಾಗಿ ವಾಹನಗಳನ್ನು ಕೊಟ್ಟಿದ್ದಾರೆ. ಇನ್ನು, ಎಂ.ಜೆ. ನಗರದಲ್ಲಿನ ಉದ್ಯಮಿಗಳು ಸ್ವಂತ ಖರ್ಚಿನಿಂದ ಬಡಾವಣೆಯ ತುಂಬೆಲ್ಲಾ ಔಷಧ ಹೊಡೆಸಿದ್ದಾರೆ. ಇದಿಷ್ಟು ಹೊರತುಪಡಿಸಿದರೆ ಬಹುತೇಕರು ನಮಗೂ ಸಮಾಜಕ್ಕೂ ಸಂಬಂಧವಿಲ್ಲ ಎನ್ನುವಂತೆ ದೂರವೇ ಉಳಿದುಕೊಂಡಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

‘ನಗರದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಗುಡಿ, ಗುಂಡಾರಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ಕೊಡುತ್ತಾರೆ. ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಬಡವರ ಸಹಾಯಕ್ಕೆ ಮುಂದೆ ಬರದಿರುವುದು ದುರದೃಷ್ಟಕರ. ಕ್ಷೇತ್ರದಿಂದ ಗೆದ್ದು ಮಂತ್ರಿಯಾಗಿರುವ ಆನಂದ್‌ ಸಿಂಗ್‌ ಕೂಡ ಈ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಹೇಳಿದರು.

‘ಬೇರೆ ಕಡೆಗಳಲ್ಲಿ ಶ್ರೀಮಂತರು ಕೋಟಿ ಕೋಟಿ ದೇಣಿಗೆ ನೀಡುತ್ತಿದ್ದಾರೆ. ನಮ್ಮೂರಿನ ಕುಬೇರರು ಅಷ್ಟು ಕೊಡುವುದು ಬೇಡ. ಎಷ್ಟು ಜನ ಬಡವರು, ಭಿಕ್ಷುಕರಿದ್ದಾರೆ. ಅವರನ್ನು ಗುರುತಿಸಿ, ಕನಿಷ್ಠ ಒಂದು ಹೊತ್ತು ಹೊಟ್ಟೆ ತುಂಬ ಊಟ ಕೊಟ್ಟರೆ ಸಾಕಿತ್ತು. ಆದರೆ, ಈಗ ತಡವಾಗಿದೆ. ಯಾರೊಬ್ಬರೂ ನೆರವಿಗೆ ಮುಂದೆ ಬರದ ಕಾರಣ ಜಿಲ್ಲಾಡಳಿತವೇ ಈಗ ಮುಂದಾಗಿರುವುದು ಉತ್ತಮ ಕೆಲಸ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಜನ ಮನೆಯೊಳಗೆ ಇರಬೇಕೆಂದು ಸರ್ಕಾರ ಹೇಳುತ್ತದೆ. ಆದರೆ, ಅನೇಕರಿಗೆ ಮನೆಯೇ ಇಲ್ಲ. ಹಲವು ಮಂದಿ ತುಂಗಭದ್ರಾ ಕಾಲುವೆಯ ಪಕ್ಕ ನೆಲೆಸಿದ್ದಾರೆ. ಅವರಿಗೆ ಒಂದು ಹೊತ್ತಿನ ಆಹಾರ ಸಿಗುತ್ತಿಲ್ಲ. ಯಾರೋ ಶ್ರೀಮಂತರಿಗೆ ಕಾಯದೆ ಜಿಲ್ಲಾಡಳಿತವೇ ನೆರವಿಗೆ ಮುಂದೆ ಬರಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸೋಮಶೇಖರ್‌ ಬಣ್ಣದಮನೆ ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು