ರಾಜ್ಯ
ಲಾಕ್ ಡೌನ್ ನಿಂದ ಹಸಿವು ತಾಳಲಾರದೇ ವೃದ್ಧ ಸಾವು: ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು!
ಹಸಿವಿನಿಂದ ಬಳಲಿ ಸುಮಾರು 75 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಗ್ರಾಮಾಂತರ ಪ್ರದೇಶದ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿ ನಡೆದಿದೆ. ವೃದ್ಧನ ಅಂತ್ಯಕ್ರಿಯೆ ನೆರವೇರಿಸಿ ಮುಸ್ಲಿಮರು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ಸರಿಯಾದ ಆಹಾರ, ನೀರು ಸಿಗದೇ ವೃದ್ಧರೊಬ್ಬರು ತಾಲ್ಲೂಕಿನ ಅಂತರಸಂತೆ ಗ್ರಾಮದ ಮೈಸೂರು-ಮಾನಂದವಾಡಿ ಮುಖ್ಯರಸ್ತೆಯ ಸಮೀಪ ಅಸುನೀಗಿದ್ದಾರೆ.
ಅಂತರಸಂತೆ ಹಾಗೂ ಸುತ್ತಮುತ್ತ ಗ್ರಾಮದಲ್ಲಿ ಭಿಕ್ಷೆ ಬೇಡಿ ಜೀವನ ಕಳೆಯುತ್ತಿದ್ದ ವೃದ್ಧ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದು, ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಈತ ಕೇರಳ ಮೂಲದಿಂದ ಬಂದಿದ್ದು, ಕಳೆದ ಅನೇಕ ದಿನಗಳಿಂದ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಿಕ್ಷೆ ಬೇಡಿ ಜೀವನ ಕಳೆಯುತ್ತಿದ್ದರು ಎನ್ನಲಾಗಿದೆ.
ದೇಶವೇ ಲಾಕ್ ಡೌನ್ ಆಗಿರುವ ಪರಿಣಾಮ ಎಲ್ಲಾ ಅಂಗಡಿಗಳು ಹಾಗೂ ಹೋಟೆಲ್ ಗಳು ಬಾಗಿಲು ಹಾಕಿದ್ದು, ಊಟ ಸಿಗದೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜತೆಗೆ ಅನಾರೋಗ್ಯದಿಂದಲೂ ಬಳಲುತ್ತಿದ್ದ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಅಂತರಸಂತೆ ಗ್ರಾಮ ಪಂಚಾಯಿತಿ ಹಾಗೂ ಅಂತರಸಂತೆಯ ಮುಸ್ಲಿಂ ಸಮುದಾಯದ ಮುಖಂಡರು ಸೇರಿ ಗ್ರಾಮದ ಮುಸ್ಲಿಂ ಸ್ಮಶಾನದಲ್ಲಿ ಬೀಚನಹಳ್ಳಿ ಪೊಲೀಸ್ ಇಲಾಖೆಂು ಸಹಕಾರದೊಂದಿಗೆ ಅಂತ್ಯಕ್ರಿಯೆ ನಡೆಸಿದರು.
ಘಟನೆ ನಡೆದು ಸಮಾರು 4-5 ಗಂಟೆಗಳಾದರೂ ಸ್ಥಳಕ್ಕೆ ಅಧಿಕಾರಿಗಳು ಬಾರದಿದ್ದರಿಂದ ಕೆಲ ಕಾಲ ರಸ್ತೆಯ ಬದಿಯಲ್ಲೇ ಅನಾಥವಾಗಿ ಬಿದ್ದಿದ್ದ ಶವಕ್ಕೆ ಅಂತರಸಂತೆ ಗ್ರಾಮದ ಮುಸ್ಲಿಂ ಮುಖಂಡರು, ಆಶಾ ಕಾರ್ರ್ಯಕರ್ಯೆ ಮುಸ್ವೀರ ಅವರ ಸಹಾಯದಿಂದ ದೇಹಕ್ಕೆ ಬಟ್ಟೆ ಹೊಂದಿಸಿ ಬಿಸಿಲು ತಾಗದಂತೆ ತಡೆದರು.
ಬೀಚನಹಳ್ಳಿ ಪೊಲೀಸ್ ಠಾಣೆಂುಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್‌ಐ ರಾಮಚಂದ್ರನಾಯಕ್ ಹಾಗೂ ಸಿಬ್ಬಂದಿ ವರ್ಗ ಆಗಮಿಸಿ ಪರಿಶೀಲನೆ ನಡೆಸಿದರು. ಅಂತರಸಂತೆ ಪಿಡಿಒ ಆರ್.ಕೆ.ಚಿದಾನಂದ ಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಲೀಂ ಪಾಷ, ಕಾರ್ಯದರ್ಶಿ ಕೇಶವ ಮೂತರ್ಿ, ಗ್ರಾಮಸ್ಥರು ಹಾಜರಿದ್ದರು.